Posts

Showing posts from September, 2021
 *ಮೈಲಿಗಲ್ಲು 2*  *ಸ್ವರ - ಓ ಚಿಹ್ನೆ - ಓತ್ವ*  ಕೊ ಖೊ ಗೊ ಘೊ ಚೊ ಛೊ ಜೊ ಝೊ ಟೊ ಠೊ ಡೊ ಢೊ ಣೊ ತೊ ಥೊ ದೊ ಧೊ ನೊ ಪೊ ಫೊ ಬೊ ಭೊ ಮೊ ಯೊ ರೊ ಲೊ ವೊ ಶೊ ಷೊ ಸೊ ಹೊ ಳೊ  *ಸಾಧನ ಪದಗಳು*  ಮೊಲ ದೊರೆ ನೊಣ ಕೊಳ ಹೊಂಗೆ ಮೊರ ಹೊಗೆ ಹೊದಿಕೆ ಕೊಡಲಿ ಮೊಸಳೆ ಕೊರಳು ಸೊಗಸು ಮೊಳಕ ಮೊಸರು ಗೊಂಚಲು ಉಡುಗೊರೆ ಜೇನುನೊಣ ರೆಂಬೆ-ಕೊಂಬೆ ಅಂಕುಡೊಂಕು ತೊಂಡೆಕಾಯಿ ಗೊಂಬೆಯಾಟ ಹೊಂಚುಹಾಕು ಹೊಂದಾಣಿಕೆ   *ವಾಕ್ಯಗಳು*  1.ಬಾಳೆ ಗಿಡದಲಿ ಬಾಳೆ ಗೊನೆಯಿದೆ.  2.ವಿಮಲೆಯ ಕೈಯಲ್ಲಿ ಗೊಂಬೆ ಇದೆ.  3.ನರಿ ಕೊಳಲು ಊದುತಿದೆ. 4.ಕೊಳದ ನೀರಿನಲಿ ಮೀನುಗಳಿವೆ.  *ವಾಚಕಗಳು*   *3. ಹೊಸ ಕೊಡೆ*  ಒಂದು ದಿನ ಮೀನಾಳ ಮಾವ ಅವಳಿಗಾಗಿ ಹೊಸ ಕೊಡೆ ತಂದರು.ಕೊಡೆ ಕಂಡ ಮೀನಳಿಗೆ ತುಂಬಾ ಆನಂದವಾಯಿತು .ಮರುದಿನ ಶಾಲೆಗೆ ಹೊರಟಳು ಅವಳ ಗೆಳತಿ ಸುಮಿ ಮೀನಾಳ ಕೊಡೆ ಕಂಡು ಬೆರಗಾದಳು .ಇದು ನನಗಾಗಿ ಮಾವ  ತಂದಿರುವ ಕೊಡೆ ಎಂದು ಜಂಬದಿಂದ ಹೇಳಿದಳು .ಆಗಲೇ ಮಳೆ ಶುರುವಾಯಿತು ಮೀನಾ ಕೊಡೆ ತೆರೆದು ನಡೆದಳು .ಆಗ ಗಾಳಿ ಬೀಸಿತು ಗಾಳಿಗೆ ಕೊಡೆ ಮೀನಾಳ ಕೈಯಿಂದ ಹಾರಿತು. ಮೀನ ಕೊಡೆಯನು ಹಿಡಿಯಲು ಓಡಿದಳು ಆದರೆ ಕೊಡೆ ದೂರ ದೂರ ಹಾರಿತು ಓಡುವಾಗ ಮೀನಾ ಕಾಲುಜಾರಿ ಉರುಳಿದಳು. ಮೀನಳ ಕೊಡೆ ಹಾರಿ ಗಿಡದ ಮೇಲೆ ಸಿಲುಕಿತು .ಅವಳು ಗಿಡ ಅಲುಗಾಡಿಸಿದಳು ಎಲೆಗಳ ಮೇಲಿರುವ ಮಳೆಯ ಹನಿಗಳು ಮೈಮೇಲೆ ಉದುರಿದವು ....